Friday, June 3, 2016

ಮೃಡ ಬಸವನೂರು ಶಿಶುನಾಳ



ಮೃಡ ಬಸವನೂರು ಶಿಶುನಾಳ 

ಕರುನಾಡ ಉತ್ತರದಿ ಮೆರೆಯುವ ಬೀಡಿಹುದು
ಸಿರಿಯ ಸಂಸ್ಕೃತಿಯ ಕೃತಪುರ | ಜಿಲ್ಲೆಯಲಿ
ಪರಿಸಿದ್ಧಿ ಪಡೆದ ಶಿಗ್ಗಾವಿ |

ಶಿಗ್ಗಾವಿ ಪರಿಸರದ ಸಗ್ಗದ ನೆಲೆವೀಡು 
ಮೊಗ್ಗಿನ ಕುಸುಮ ಶಿಶುನಾಳ | ಪುರವದುವೆ 
ದಿಗ್ಗಜ ಶರಿಫನ ಹುಟ್ಟೂರು |

ಗುಡಗೇರಿ ಹುಲಗೂರ ಒಡನಾಟ ಗಳಿಸಿರುವ 
ಮರದ ಬಸವನೂರು ಶಿಶುನಾಳ | ಶರಿಫನ
ಒಡೆಯ ನೆಲೆದಾನೋ ಬಯಲಿನಲಿ |

ಗಟ್ಟಿ ಕಂಬದ ಮೇಲೆ ಪಟ್ಟಾಗಿ ನೆಲೆಸಿರುವ 
ಬತ್ತ ಬಯಲಿನ ಬಸವನೆ | ಶರಿಫನ
ಕಟ್ಟ ಕಡೆಸಾಲ ಮುದ್ರಿಕೆಯೋ |

ಅಂಕಿತದ ರೂಪಕ್ಕ ಶಂಕರನ ಸೇವಕ 
ಬಿಂಕದ ಬಸವ ಒಲಿದಾನ | ಪದಗಳ 
ಟಂಕಿಸುವ ಮುದ್ರಿಕೆಯಾಗ್ಯಾನ |

ಹುಣಸೆಯ ಮರದಡಿ ಘನವಾಗಿ ನೆಲೆನಿಂತು
ಮನಸು ಗೆಲ್ಲುವ ಬಸವಣ್ಣ | ಹಾಡಿನಲಿ 
ಕುಣಿದಾನಂಕಿತ ರೂಪದಲಿ |

ಊರೊಡೆಯ ಬಸವೇಶ ಮೇರು ಪದದಲಿ ಹೊಂದಿ 
ತಾರಕಕ್ಕೇರಿ ನಿಂತಾನೊ | ಅನುಭಾವ 
ಸೂರೆ ಮಾಡ್ಯಾನೊ ಲೋಕಕ್ಕ |

No comments: