Monday, October 24, 2016

tripadi bhaarata

ಮೊದಲಿಗೆ ವಂದಿಸುವೆ

ಮೊದಲಿಗೆ ವಂದಿಸುವೆ ತೊದಲಿನ ನುಡಿಗಳಲಿ
ಹದವಾದ ಚಿತ್ತ ನೀಡೆನಗೆ | ಗಣಪತಿಗೆ 
ಚದುರ ಭಾರತವ ರಚಿಸಲು |1|

ಗಣಪ್ತಿಯೆ ನಿನಗಿಂದು ಹಣೆಮಣಿದು ವಂದಿಸುವೆ 
ಗುಣ ಭರಿತ ಕಾವ್ಯ ಭಾರತವ | ರಚಿಸಲು 
ಅನುಮತಿಯ ನೀಡು ಪ್ರೀತಿಯಲಿ |2|

ವ್ಯಾಸಯಿಡಿ ಭಾರತವ ದೋಷಗಳು ಇರದಂತೆ 
ಸೋಶಿದಕ್ಷರದಿ ಮೂಡಿಸಿದ | ಗಣಪತಿಯೆ 
ಸಾಸಿರ ನಮನ ಸಲ್ಲಿಸುವೆ |3|

ಕೌರವ ಪಾಂಡವರ ಭಾರತದ ಹಿರಿ ಕತೆಯ 
ಸಾರ ಸೌರಭವ ಹಿಡಿದಿಡುವ | ಸಹಸಕೆ 
ಗೌರಿ ಪುತ್ರನೆ ವರನೀಡು |4|

ಹದಿನೆಂಟು ಪರ್ವದಲಿ ಚದುರೊಇದ ಭಾರತಕೆ 
ಸದರದಲಿ ತೆಕ್ಕೆ ಬಿದ್ದಿರುವೆ | ಗಣಪತಿಯೆ 
ಹೆದರಿಕೆಯ ಹರಿದು ಬೀಸಾಕು |5| 

ಭಾರತದ ಕತೆಯೆಂಬ ಘೋರ ಅಡವಿಯ ಹೊಕ್ಕು 
ಪಾರಾಗೊ ಜಾಣ್ಮೆ ನೀಡುವ | ಗಣಪತಿಗೆ 
ನೂರೊಂದು ನಮನ ಸಲ್ಲಿಸುವೆ |6|

ಲೊಕ ವಿದ್ಯೆಯ ನೀಡಿ ಸಾಕಿ ಸಲುಹಿದ ತಾಯೆ 
ಮೂಕನಲೂ ಕನಸು ಬಿತ್ತುವ | ಸರಸತಿಯೆ 
ತೂಕದ ಶಬ್ದ ನೀಡೆನಗೆ |7|

ಕರದಿ ವೀಣೆಯ್ ಅಹಿಡಿದು ಸರದಿಯಲೆಗಳ ಮಿಡಿದು 
ಧರಣಿ ಆಗಸದ ತುಂಬೆಲ್ಲ | ಹಬ್ಬಿಸುವ 
ಸರಸತಿಗೆ ಮಣಿದು ವಂದಿಸುವೆ |8|

ಹಿರಿದಾದ ಕತೆಯನ್ನು ಕಿರಿದಾದ ತ್ರಿಪದಿಯಲಿ 
ಸೆರೆ ಹಿಡಿಯ ಹೊರಟ ಈ ನಿನ್ನ | ಕುವರನಿಗೆ
ವರನೀಡು ತಾಯೆ ಸರಸತಿಯೆ |9|

ಆಗಾಗ ಬರೆದಿಟ್ಟ ರಾಗದ ತ್ರಿಪದಿಗಳು 
ಯೋಗದ ಬಂಧಕಳವಡಿಸು | ಸರಸತಿಯೆ 
ಬಾಗಿ ವಂದಿಸುವೆ ವಿನಯದಲಿ |10|

ಕಂದನ ತಪ್ಪುಗಳ ಕುಂದೆಂದು ತಿಳಿಯದೆ 
ಅಂದದಲಿ ಪದವ ಅಣಿಗೊಳಿಸು | ಸರಸತಿಯೆ 
ವಂದಿಸುವೆ ನಿನಗೆ ಮೊದಲಿಗೆ |11|

ಕಾಡಡವಿ ಭಾರತದ ಗೂಡವನು ಕೆತ್ತಲು 
ಜೋಡು ಪದಗಳನು ಹೊಳೆಯಿಸು | ಸರಸತಿಯೆ 
ಬೇಡುವೆನು ನಿನಗೆ ಮೊದಲಿಗೆ |12|

ಜೇಡನ ಬಲೆಯಂತೆ ನಾಡೆಲ್ಲ ಹಬ್ಬಿರುವ 
ಗೂಢ ಭಾರತದ ಕತೆ ಮೂಲ | ಸೂತ್ರದ 
ಜಾಡು ತೋರಿಸು ಸರಸತಿಯೆ |13|

ಕಡದಳ್ಲಿ ಕಿರಿ ಕವಿಯು ದೃಢವಾದ ಭಾವದಲಿ 
ಮೃಢ ಹರನ ರೂಪ ಕಲ್ಮೇಶ | ಗೊಂದಿಸುತ 
ಬಿಡದೆ ಪಡೆದಿಹನು ಕೃಪೆಯನ್ನು |14|

ಚಂದದ ಕತೆಗಿಷ್ಟು ಕುಂದು ಬಾರದ ಹಾಗೆ 
ಮುಂದು ಮುಂದಕ್ಕೆ ಕೈಹಿಡಿದು | ಮುನ್ನಡೆಸು 
ವಂದಿಸುವೆ ನಿನಗೆ ಕಲ್ಮೇಶ |15|

ಅತ್ತಲಿತ್ತಲುಯೆತ್ತ ಚಿತ್ತ ಹರಿಯ ಹಾಗೆ 
ಮುತ್ತು ಮಣಿ ಶಬ್ದ ಹೊಳೆಯಿಸು | ಕಲ್ಮೇಶ 
ಮೊತ್ತ ಮೊದಲಿಗೆ ವಂದಿಸುವೆ |16|

ಅಚ್ಚ ಗಣ್ಣಡ ನುಡಿಯ ಹೊಚ್ಚಹೊಸ ಭಾವದಲಿ 
ಮೆಚ್ಚಿ ಭಾರತದ ಕತೆಯನ್ನು | ಹೇಳುವ 
ಕೆಚ್ಚನ್ನು ತುಂಬು ಸಿರಿದೇವಿ |17|




Sent from http://bit.ly/hsR0cS

No comments: